ಸರ್ಕಾರದಿಂದ ಮಾಜಿ ಸೈನಿಕರ ವೈದ್ಯಕೀಯ ಚಿಕಿತ್ಸೆಗಾಗಿ RMEWF-ಆರ್ಥಿಕ ನೆರವು

ವಿವರಗಳು :–

ಪಿಂಚಣಿ ಪಡೆಯದ ಹಳೆಯ ಸೈನಿಕರು/ಹವಿಲ್ದಾರ್ವರೆಗಿನ ಹುದ್ದೆಯ ವಿಧವೆಯರಿಗೆ/ಪ್ರತಿದಿನದ ಔಷಧಿ ಖರ್ಚುಗಳನ್ನು ನಿಭಾಯಿಸಲು ಸರಿಹೊಂದುವ ಆರ್ಥಿಕ ಸಹಾಯ ಒದಗಿಸುವ ಯೋಜನೆ ಇದಾಗಿದೆ.


ಆರೋಗ್ಯದ ಖರ್ಚುಗಳು ಹೆಚ್ಚುತ್ತಿರುವುದರಿಂದ, ಪಿಂಚಣಿ ಪಡೆಯದ ಇಎಸ್‌ಎಂಗಳು ವಯಸ್ಸಾದ ಮೇಲೆ ಕಾಯಿಲೆಗಳನ್ನು ಎದುರಿಸಲು ಕಷ್ಟವಾಗುತ್ತದೆ. ಆ ಸಮಯದಲ್ಲಿ, ವೈದ್ಯಕೀಯದ ಖರ್ಚುಗಳು ಅಂತಹ ಇಎಸ್‌ಎಂಗಳನ್ನು ಬಡತನ ಮತ್ತು ಗೌರವವಿಲ್ಲದ ಸ್ಥಿತಿಗೆ ತಳ್ಳುತ್ತದೆ. ಬೇರೆ ಯಾವ ಆದಾಯವಿಲ್ಲದೆ ಮತ್ತು ಬಡತನದಲ್ಲಿರುವ ಪಿಂಚಣಿ ಪಡೆಯದವರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಇದು.
ಭಯಾನಕ ಕಾಯಿಲೆಗಳ ಚಿಕಿತ್ಸೆಗಾಗಿ
ಬೇರೆ ತರಹದ ಕಾಯಿಲೆಗಳ ಟ್ರೀಟ್‌ಮೆಂಟ್‌ಗೆ ಆಗುವ ಖರ್ಚನ್ನು ಬೇರೆಯದ್ದೇ ಯೋಜನೆಯಲ್ಲಿ ನೀಡಲಾಗುತ್ತದೆ.


ಪ್ರಯೋಜನಗಳು :-
ಒಂದು ವಿತ್ತೀಯ ವರ್ಷದಲ್ಲಿ ಅರ್ಹರಾದ ಭೂತಪೂರ್ವ ಸೈನಿಕರು/ವಿಧವೆಯರಿಗೆ ವಾರ್ಷಿಕವಾಗಿ ಗರಿಷ್ಠ ರೂ. 30,000/- ಗಳವರೆಗೆ ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು :–

ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:-

*ಅರ್ಜಿದಾರರು ಪಿಂಚಣಿ ಪಡೆಯದ ಮಾಜಿ ಸೈನಿಕ ಅಥವಾ ಅವರ ಪತ್ನಿಯಾಗಿರತಕ್ಕದ್ದು.
* ಹವಿಲ್ದಾರ್/ಸಮಾನ ಶ್ರೇಣಿ ಮತ್ತು ಅದಕ್ಕಿಂತ ಕೆಳಗಿನ ಹುದ್ದೆ ಹೊಂದಿರಬೇಕು.
*ಅಯಾ ಜಿಲ್ಲಾ ಸೈನಿಕ ಮಂಡಳಿಯು (ZSB) ಶಿಫಾರಸು ಮಾಡುವುದು ಕಡ್ಡಾಯ.
*ಅಧಿಕೃತ ಸರ್ಕಾರಿ ಆಸ್ಪತ್ರೆಗಳಲ್ಲಿ CGHS/ECHS ಅಡಿಯಲ್ಲಿ ನಿಗದಿಪಡಿಸಿದ ದರಗಳಲ್ಲಿ ಖರ್ಚನ್ನು ಮರುಪಾವತಿ ಮಾಡಲಾಗುವುದು.

ಅರ್ಜಿ ಪ್ರಕ್ರಿಯೆ :–

ಆನ್ಲೈನ್ :–

1 ಅರ್ಹರಾದ ಹಳೆ ಸೈನಿಕರು/ಅವರ ಹೆಂಡತಿಯಂದಿರು ಕೇಂದ್ರೀಯ ಸೈನಿಕ ಮಂಡಳಿ ಸಚಿವಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. https://ksb.gov.in/ ಜಾಲತಾಣದ ಮೊದಲ ಪುಟದಲ್ಲಿರುವ “ನೋಂದಣಿ”ಯನ್ನು ಕ್ಲಿಕ್ ಮಾಡಿ.
2 ಈಗ, ಒಂದು ನೊಂದಣಿ ನಮೂನೆಯು ತೆರೆದುಕೊಳ್ಳುತ್ತದೆ, ಅಗತ್ಯವಿರುವ ಮಾಹಿತಿಯೊಂದಿಗೆ ನಮೂನೆಯನ್ನು ಭರ್ತಿ ಮಾಡಿ.
ಚಿತ್ರವನ್ನು ಅಪ್‌ಲೋಡ್ ಮಾಡಿ
3  “ಉಳಿಸು” ಗುಂಡಿಯನ್ನು ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಉಳಿಸಿ, ಉಳಿಸಿದ ವಿವರಗಳು ಮತ್ತು ಗುಪ್ತಪದವನ್ನು ನೊಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
4  ಕೆಎಸ್‌ಬಿ ತಾಣಕ್ಕೆ ಲಾಗಿನ್ ಆಗಲು ಇಮೇಲ್ ವಿಳಾಸಕ್ಕೆ ಕಳುಹಿಸಲಾದ ಸಕ್ರಿಯಗೊಳಿಸುವ ಕೊಂಡಿಯನ್ನು ಕ್ಲಿಕ್ ಮಾಡಿ.
5 ಬಳಕೆದಾರಹೆಸರು, ಗುಪ್ತಪದ ಮತ್ತು ಪರಿಶೀಲನಾ ಸಂಕೇತವನ್ನು ನಮೂದಿಸಿ ಮತ್ತು “ಲಾಗಿನ್” ಗುಂಡಿಯನ್ನು ಕ್ಲಿಕ್ ಮಾಡಿ.
6 ಯೋಜನೆಯ ಹೆಸರನ್ನು ಆರಿಸಿ ಮತ್ತು ಕೇಳಲಾದ ಮಾಹಿತಿಯನ್ನು ನಮೂದಿಸುವ ಮೂಲಕ ಹೊಸ ಅರ್ಜಿಯನ್ನು ತುಂಬಲು ಶುರುಮಾಡಿ.
7 ಸಂಬಂಧಪಟ್ಟ ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ (ZSWO)ಯಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಅಗತ್ಯ ದಾಖಲೆಗಳ ನಕಲುಗಳನ್ನು ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕು.
8 ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ಮೇಲೆ, ZSWO ಆನ್‌ಲೈನ್ ಅರ್ಜಿಗಳನ್ನು ಪರಾಮರ್ಶಿಸುತ್ತದೆ ಮತ್ತು ಪರಿಶೀಲನೆಗಾಗಿ ಅರ್ಜಿದಾರರಿಗೆ ಸಮಯವನ್ನು ನಿಗದಿಪಡಿಸುತ್ತದೆ.
9 ಯಶಸ್ವಿಯಾಗಿ ಪರಿಶೀಲಿಸಿದ ನಂತರ, ZWSO ಆನ್‌ಲೈನ್ ಅರ್ಜಿಯನ್ನು ಅನುಮೋದಿಸುತ್ತದೆ ಮತ್ತು ಹಾರ್ಡ್ ಪ್ರತಿಯೊಂದಿಗೆ, ವಿದ್ಯುನ್ಮಾನ ಪ್ರತಿಯನ್ನೂ ರಾಜ್ಯ ಸೈನಿಕ ಮಂಡಳಿಗಳ (RSB) ಮುಖಾಂತರ ಮುಂದಿನ ಕ್ರಮಕ್ಕಾಗಿ ಪ್ರತಿ ತಿಂಗಳು ಕೇಂದ್ರೀಯ ಸೈನಿಕ ಮಂಡಳಿಗೆ (KSB) ಕಳುಹಿಸುತ್ತದೆ.

* ಕೆಎಸ್‌ಬಿ ಸಚಿವಾಲಯದಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿದೆ

ಅರ್ಜಿಯು ಸೆಂಟ್ರಲ್ ಸೈನಿಕ ಮಂಡಳಿಯನ್ನು ತಲುಪಿದ ಬಳಿಕ, ಆ ವಿಭಾಗದ ಜವಾಬ್ದಾರಿಯುತ ಅಧಿಕಾರಿಗಳು ಅದನ್ನು ಪರಾಮರ್ಶಿಸಿ, ಜೆಡಿ (ಕಲ್ಯಾಣ) ಅವರ ಮಂಜೂರಾತಿಗಾಗಿ ನಮೂದಿಸಿದ ಪಟ್ಟಿಯನ್ನು ಅಪ್‌ಲೋಡ್ ಮಾಡುತ್ತಾರೆ.
ಆ ರೀತಿಯ ಮಂಜೂರಾತಿಗಾಗಿನ ಅರ್ಜಿಗಳನ್ನು ಆನಂತರ ಸಮರ್ಥ ಅಧಿಕಾರದ ಮಂಜೂರಾತಿಗಾಗಿ ಒಟ್ಟಿಗೆ, ಸಾಧ್ಯವಾದಷ್ಟು ಮಟ್ಟಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಲ್ಲಿಸಲಾಗುತ್ತದೆ.


* ಹಣ ಸಂದಾಯದ ರೀತಿ
ಕೆ.ಎಸ್.ಬಿ. ಕಾರ್ಯದರ್ಶಿಯವರ ಒಪ್ಪಿಗೆಯಾದ ನಂತರ, ಕಲ್ಯಾಣ ವಿಭಾಗದಿಂದ ಅರ್ಜಿಯನ್ನು ಹಣ ಪಾವತಿಗಾಗಿ ಕ್ರಮ ಕೈಗೊಳ್ಳಲಾಗುವುದು.
ಕಲ್ಯಾಣ ವಿಭಾಗವು ಮಾಜಿ ಸೈನಿಕರ ಸೇವಾ ಸಂಖ್ಯೆ, ಹೆಸರು, ಬ್ಯಾಂಕಿನವರ ಐಎಫ್‌ಎಸ್ ಕೋಡ್ ಹಾಗು ಬ್ಯಾಂಕ್ ಖಾತೆ ಸಂಖ್ಯೆಯನ್ನು ಸರಿಯಾಗಿ ನೋಡಿಕೊಂಡು ಮಂಜೂರಾದ ಪ್ರಕರಣಗಳ ಪಟ್ಟಿಯನ್ನು ಹಣ ಪಾವತಿಗಾಗಿ ಲೆಕ್ಕಪತ್ರ ವಿಭಾಗಕ್ಕೆ ಕಳುಹಿಸುತ್ತದೆ.
ಆನಂತರ ಲೆಕ್ಕಪತ್ರಗಳ ವಿಭಾಗವು ಅನ್ವಯಿಸುವ ಫಲಾನುಭವಿಗಳಿಗೆ ಇಸಿಎಸ್ ಮೂಲಕ ನೇರವಾಗಿ ಹಣವನ್ನು ವರ್ಗಾಯಿಸಲು ಪಟ್ಟಿಯನ್ನು ಪ್ರೊಸೆಸ್ ಮಾಡುತ್ತದೆ.

* ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಿ

ಅರ್ಜಿದಾರರು ಅದೇ ಅಂತರ್ಜಾಲ ತಾಣಕ್ಕೆ ಭೇಟಿ ನೀಡತಕ್ಕದ್ದು: https://ksb.gov.in/index.htm
ಅಂತರ್ಜಾಲ ತಾಣದ ಮುಖ್ಯ ಪುಟದಲ್ಲಿರುವ “ಅರ್ಜಿಯ ವಿವರ” ಕೊಂಡಿಯನ್ನು ಸ್ಪರ್ಶಿಸಿ.
ಈಗ ನಿಮ್ಮ DAK ಗುರುತಿನ ಸಂಖ್ಯೆ (ID) ಮತ್ತು ಖಾತ್ರಿಪಡಿಸುವ ಸಂಕೇತವನ್ನು ನಮೂದಿಸಿ. “ಹುಡುಕು” ಗುಂಡಿಯನ್ನು ಸ್ಪರ್ಶಿಸಿ.

ಬೇಕಾಗುವ ಕಾಗದಪತ್ರಗಳು :–

ZSWO ಇಂದ ಕ್ರಮಬದ್ಧವಾಗಿ ರುಜುವಾತು ಮಾಡಲ್ಪಟ್ಟ ಈ ಕೆಳಗಿನ ಕಾಗದಪತ್ರಗಳ ನಕಲುಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು:-
* ಬಿಡುಗಡೆ ಪುಸ್ತಕ/ದಾಖಲೆಗಳು.
* ZSB ಕೊಡುವ ಐ-ಗುರುತಿನ ಚೀಟಿ (I-Card) ನಿವೃತ್ತ ಯೋಧರು (ESM) ಮತ್ತು ವಿಧವೆಯರಿಬ್ಬರಿಗೂ ಕಡ್ಡಾಯವಾಗಿರುತ್ತದೆ.
*ಚಿಕಿತ್ಸೆ ನೀಡಿದ ವೈದ್ಯರು ಮೇಲು ರುಜು ಮಾಡಿದ ಮೂಲ ವೈದ್ಯಕೀಯ ಬಿಲ್ಲುಗಳು.
* ಚಿಕಿತ್ಸೆ ನೀಡಿದ ವೈದ್ಯರು ಪ್ರತಿ ರುಜು ಮಾಡಿದ ಆಸ್ಪತ್ರೆಯ ಬಿಡುಗಡೆ ಸಾರಾಂಶ.
* ಅರ್ಜಿದಾರರು ರಾಜ್ಯ ಅಥವಾ ಈಗಿನ ಕೆಲಸದಾತನಿಂದ ಮರುಪಾವತಿ ಅಥವಾ ವೈದ್ಯಕೀಯ ಸಹಾಯಧನದ ರೂಪದಲ್ಲಿ ಯಾವುದೇ ಹಣ/ಧನಸಹಾಯವನ್ನು ಪಡೆದಿಲ್ಲ ಎಂದು ಹೇಳುವ ದೃಢೀಕರಣ ಪತ್ರ.
* ಬ್ಯಾಂಕ್ ಖಾತೆ ಸಂಖ್ಯೆ (PNB/SBI ನಲ್ಲಿ ಮಾತ್ರ) ಮತ್ತು IFS ಸಂಕೇತದ ವಿವರಗಳು.

ಗೊಂದಲಗಳು :–

ಯಾವುದೇ ಸ್ವಂತ ಇಲ್ಲವೇ ಸರ್ಕಾರಿ ದವಾಖಾನೆಗಳಲ್ಲಿ ಟ್ರೀಟ್ಮೆಂಟ್ ಪಡೆಯಲು ಈ ಸ್ಕೀಮ್ ಉಪಯೋಗಿಸಬಹುದೇ?

ಉ :–ಇಲ್ಲ. ಒಪ್ಪಿಗೆ ಕೊಟ್ಟ ಸರ್ಕಾರಿ ದವಾಖಾನೆಗಳಲ್ಲಿ ಖರ್ಚಾದದ್ದಕ್ಕೆ CGHS/ECHS ಕೆಳಗೆ ಅಂಗೀಕಾರವಾದ ರೇಟ್ನಲ್ಲಿ ಫೈನಾನ್ಸಿಯಲ್ ಸಹಾಯ ಸಿಗುತ್ತದೆ.

ನಾನು ಯಾವ ಬ್ಯಾಂಕಿನ ಬ್ಯಾಂಕ್ ಡೀಟೇಲ್ಸ್ ಕೊಡಬಹುದು?

ಉ :–ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಥವಾ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕೌಂಟ್ ಡೀಟೇಲ್ಸ್ ಮಾತ್ರ ಅಪ್ಲೈ ಮಾಡಲು ವ್ಯಾಲಿಡ್ ಆಗಿರುತ್ತದೆ.

ರಿಜಿಸ್ಟ್ರೇಷನ್ ಫಾರ್ಮ್ನಲ್ಲಿ ಯಾರ ಅಕೌಂಟ್ ಡೀಟೇಲ್ಸ್ ತುಂಬಬೇಕು?

ಉ :–ಅರ್ಜಿದಾರರು ತಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ನಂಬರ್ನ್ನೇ ತುಂಬಬೇಕು.