ವಿವರಣೆ :-
ಅಟಲ್ ಪಿಂಚಣಿ ಯೋಜನೆ (APY) ಆದಾಯ ತೆರಿಗೆ ಕಟ್ಟುವವರಲ್ಲದ 18-40 ವಯಸ್ಸಿನ ಉಳಿತಾಯ ಖಾತೆ ಹೊಂದಿರುವವರಿಗೆ ವೃದ್ಧಾಪ್ಯದ ಆದಾಯದ ಭದ್ರತೆ ಒದಗಿಸುವ ಒಂದು ಯೋಜನೆಯಾಗಿದೆ. ಈ ಯೋಜನೆಯು ಸಂಘಟಿತವಲ್ಲದ ವಲಯದ ಕೆಲಸಗಾರರಲ್ಲಿ ದೀರ್ಘಕಾಲ ಬದುಕುವ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕೆಲಸಗಾರರು ತಮ್ಮ ನಿವೃತ್ತಿ ಜೀವನಕ್ಕಾಗಿ ಸ್ವಂತ ಇಚ್ಛೆಯಿಂದ ಉಳಿತಾಯ ಮಾಡಲು ಉತ್ತೇಜಿಸುತ್ತದೆ.
APY ಯ ಉದ್ದೇಶ
ಈ ಯೋಜನೆಯು ಮುಖ್ಯವಾಗಿ ಬಡವರು, ಸೌಲಭ್ಯಗಳಿಂದ ವಂಚಿತರಾದವರು ಮತ್ತು ಸಂಘಟಿತವಲ್ಲದ ವಲಯದ ಕೆಲಸಗಾರರನ್ನು ಗುರಿಯಾಗಿರಿಸಿಕೊಂಡಿದೆ.
APY ಚಂದಾದಾರರ ಕೊಡುಗೆ ಚಾರ್ಟ್ –
https://www.npscra.nsdl.co.in/nsdl/scheme-details/APY_Subscribers_Contribution_Chart_1.pdf
APY ಅಡಿಯಲ್ಲಿ ವಿಧಿಸಲಾಗುವ ಶುಲ್ಕಗಳು, ಫೀಜುಗಳು ಮತ್ತು ಬಾಕಿ ಬಡ್ಡಿ:
ನಿಗದಿಪಡಿಸಿದ ಕಂತಿನ ಹಣ ಸಂದಾಯ ಮಾಡದಿದ್ದರೆ ಅಥವಾ ತಡವಾಗಿ ಪಾವತಿಸಿದರೆ APY ಚಂದಾದಾರರಿಗೆ ಶುಲ್ಕಗಳು, ಫೀಜುಗಳು ಮತ್ತು ಬಾಕಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಈ ಶುಲ್ಕಗಳು ಮತ್ತು ಅವುಗಳನ್ನು ಅನ್ವಯಿಸುವ ವಿಧಾನವನ್ನು PFRDA ಕಾಲಕಾಲಕ್ಕೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ತಿಳಿಸುತ್ತದೆ.
APY ಅಡಿಯಲ್ಲಿ ದೂರುಗಳನ್ನು ದಾಖಲಿಸುವುದು
ಚಂದಾದಾರರು ಯಾವಾಗ ಬೇಕಾದರೂ, ಎಲ್ಲಿಂದಲಾದರೂ ಉಚಿತವಾಗಿ ಈ ಕೆಳಗಿನ ಅಂತರ್ಜಾಲ ತಾಣದಲ್ಲಿ ದೂರು ದಾಖಲಿಸಬಹುದು: www.npscra.nsdl.co.in
>> ಮುಖಪುಟ >> ಇಲ್ಲಿ ಆಯ್ಕೆಮಾಡಿ: NPS-Lite ಅಥವಾ CGMS ಮೂಲಕ ದೂರು ಸಲ್ಲಿಸುವ ಚಂದಾದಾರರಿಗೆ ದೂರು ದಾಖಲಾದ ನಂತರ ಟೋಕನ್ ಸಂಖ್ಯೆ ನೀಡಲಾಗುತ್ತದೆ. ಚಂದಾದಾರರು “ಈಗಾಗಲೇ ದಾಖಲಾದ ಕುಂದುಕೊರತೆ / ವಿಚಾರಣೆಯ ಸ್ಥಿತಿಗತಿ ತಿಳಿಯಲು” ಆಯ್ಕೆಯಡಿ ದೂರಿನ ಸ್ಥಿತಿಯನ್ನು ಪರೀಕ್ಷಿಸಬಹುದು.
ಪ್ರಯೋಜನಗಳು :-
60 ವಸಂತಗಳು ತುಂಬಿ ನಿವೃತ್ತರಾದ ಬಳಿಕ
ಖಾತೆದಾರರು 60ರ ಹರೆಯವನ್ನು ಮುಟ್ಟಿದ ನಂತರ ಈ ಕೆಳಕಂಡ ಮೂರು ಲಾಭಗಳನ್ನು ಪಡೆಯುತ್ತಾರೆ:
(i) ಭರವಸೆಯ ಕನಿಷ್ಠ ಪಿಂಚಣಿ ಮೊತ್ತ: APY ಅಡಿಯಲ್ಲಿ ಪ್ರತಿಯೊಬ್ಬ ಖಾತೆದಾರನು 60ರ ವಯಸ್ಸಿನ ನಂತರ ಮರಣ ಹೊಂದುವ ತನಕ ತಿಂಗಳಿಗೆ ರೂ. 1000/- ಅಥವಾ ರೂ. 2000/- ಅಥವಾ ರೂ. 3000/- ಅಥವಾ ರೂ. 4000/- ಅಥವಾ ರೂ. 5000/- ಗಳಂತೆ ಭರವಸೆಯ ಕನಿಷ್ಠ ಪಿಂಚಣಿಯನ್ನು ಪಡೆಯುವರು.
(ii) ಜೀವನ ಸಂಗಾತಿಗೆ ಭರವಸೆಯ ಕನಿಷ್ಠ ಪಿಂಚಣಿ ಮೊತ್ತ: ಖಾತೆದಾರರ ಮರಣಾನಂತರ, ಖಾತೆದಾರರ ಸಂಗಾತಿಯು ಮರಣ ಹೊಂದುವವರೆಗೆ ಖಾತೆದಾರರಂತೆಯೇ ಅದೇ ಪಿಂಚಣಿ ಮೊತ್ತವನ್ನು ಪಡೆಯಲು ಅರ್ಹರಿರುತ್ತಾರೆ.
(iii) ಖಾತೆದಾರರ ಉತ್ತರಾಧಿಕಾರಿಗಳಿಗೆ ಪಿಂಚಣಿ ನಿಧಿಯನ್ನು ಹಿಂದಿರುಗಿಸುವುದು: ಖಾತೆದಾರರು ಮತ್ತು ಅವರ ಸಂಗಾತಿ ಇಬ್ಬರೂ ತೀರಿಹೋದ ನಂತರ, ಖಾತೆದಾರರ ಉತ್ತರಾಧಿಕಾರಿಗಳು ಖಾತೆದಾರರ 60 ವರ್ಷ ವಯಸ್ಸಿನವರೆಗೆ ಕೂಡಿದ ಪಿಂಚಣಿ ನಿಧಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅಟಲ್ ಪಿಂಚಣಿ ಯೋಜನಗೆ (APY) ಸಲ್ಲಿಸುವ ಅಂಶಗಳು ಸೆಕ್ಷನ್ 80CCD(1) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ರೀತಿಯಲ್ಲೇ ತೆರಿಗೆ ಅನುಕೂಲಗಳಿಗೆ ಅರ್ಹವಾಗಿರುತ್ತವೆ.
ಸ್ವಯಂ ಆಗಿ ಬಿಟ್ಟುಹೋಗುವುದು (60 ವರ್ಷ ವಯಸ್ಸಿಗೆ ಮುಂಚೆ ಬಿಟ್ಟುಹೋಗುವುದು):
ಚಂದಾದಾರರು APY ಗೆ ಹಾಕಿರುವ ಹಣ ಮತ್ತು ಅವರ ಹಣದಿಂದ ಬಂದಿರುವ ನಿವ್ವಳ ನಿಜವಾದ ಒಟ್ಟುಗೂಡಿದ ಆದಾಯವನ್ನು ಮಾತ್ರ ವಾಪಸ್ಸು ಮಾಡಲಾಗುತ್ತದೆ (ಖಾತೆ ನಿರ್ವಹಣಾ ವೆಚ್ಚಗಳನ್ನು ತೆಗೆದ ನಂತರ).
ಆದರೆ, ಮಾರ್ಚ್ 31, 2016 ಕ್ಕಿಂತ ಮೊದಲು ಯೋಜನೆಗೆ ಸೇರಿದ್ದ ಚಂದಾದಾರರು ಮತ್ತು ಸರ್ಕಾರಿ ಸಹಾಯಧನ ಪಡೆದಿದ್ದರೆ, ಅದರ ಮೇಲೆ ಗಳಿಸಿದ ಒಟ್ಟುಗೂಡಿದ ಆದಾಯವೂ ಸೇರಿ ಅದನ್ನು ಪಡೆಯಲು ಸಾಧ್ಯವಿಲ್ಲ.
60 ವರುಷಕ್ಕಿಂತ ಮುಂಚೆ ತೀರಿಕೊಂಡವರಿಗೆ
ಆಯ್ಕೆ 1: ಒಂದು ವೇಳೆ ಚಂದಾದಾರರು 60 ವರುಷಕ್ಕಿಂತ ಮುಂಚೆ ತೀರಿಕೊಂಡರೆ, ಅವರ ಸಂಗಾತಿಯು ಚಂದಾದಾರರ APY ಖಾತೆಯಲ್ಲಿ ಹಣ ಹಾಕುವುದು ಮುಂದುವರಿಸಲು ಒಂದು ಅವಕಾಶವಿರುತ್ತದೆ, ಇದನ್ನು ಉಳಿದಿರುವ ಮಾಲೀಕತ್ವದ ಅವಧಿಗೆ ಸಂಗಾತಿಯ ಹೆಸರಿನಲ್ಲಿ ನಿರ್ವಹಿಸಬಹುದು, ಅಂದರೆ ಮೂಲ ಚಂದಾದಾರರು 60 ವರುಷ ವಯಸ್ಸನ್ನು ತಲುಪುವವರೆಗೆ. ಚಂದಾದಾರರ ಸಂಗಾತಿಯು ಅವರು ತೀರಿಕೊಳ್ಳುವವರೆಗೆ ಚಂದಾದಾರರ ರೀತಿಯೇ ಪಿಂಚಣಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂಗಾತಿಯು ಅವರ ಹೆಸರಿನಲ್ಲೇ APY ಖಾತೆ ಮತ್ತು ಪಿಂಚಣಿ ಹಣವನ್ನು ಹೊಂದಿದ್ದರೂ ಸಹ ಈ APY ಖಾತೆ ಮತ್ತು ಪಿಂಚಣಿ ಹಣವು ಹೆಚ್ಚಿನದಾಗಿರುತ್ತದೆ.
ಆಯ್ಕೆ 2: APY ಅಡಿಯಲ್ಲಿ ಇಲ್ಲಿಯವರೆಗೆ ಕೂಡ ಹಾಕಿರುವ ಸಂಪೂರ್ಣ ಪಿಂಚಣಿ ಹಣವನ್ನು ಸಂಗಾತಿ / ನೇಮಿತ ವ್ಯಕ್ತಿಗೆ ಹಿಂದಿರುಗಿಸಲಾಗುತ್ತದೆ.
ಅರ್ಹತೆ :-
* ಸೇರ್ಪಡೆಯಾಗುವ ವಯಸ್ಸು ಮತ್ತು ಕಂತು ಕಟ್ಟುವ ಸಮಯ
* APY ಗೆ ಸೇರಲು ಕನಿಷ್ಠ ವಯಸ್ಸು 18 ವರ್ಷಗಳು ಹಾಗು ಗರಿಷ್ಠ 40 ವರ್ಷಗಳು ಇರಬೇಕು.
* ಪಿಂಚಣಿ ಪಡೆಯುವ ವಯಸ್ಸು ಮತ್ತು ಪಿಂಚಣಿ ಶುರುವಾಗುವುದು 60 ವರ್ಷಕ್ಕೆ.
* APY ಗೆ ಹಣ ಕಟ್ಟುವವರು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ತಮ್ಮ ಉಳಿತಾಯ ಖಾತೆಯಿಂದ ಹಣವನ್ನು ‘ಆಟೋ ಡೆಬಿಟ್’ ಸೌಲಭ್ಯದ ಮೂಲಕ ಪಾವತಿ ಮಾಡಬಹುದು.
* ಹಣ ಕಟ್ಟುವವರು APY ಗೆ ಸೇರಿದ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೆ ಹಣವನ್ನು ಕಂತುಗಳಲ್ಲಿ ಕಟ್ಟಬೇಕಾಗುತ್ತದೆ.
ಅರ್ಜಿ ಪ್ರಕ್ರಿಯೆ 1:
* ಒಬ್ಬ ವ್ಯಕ್ತಿಯು ತನ್ನ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಆನ್‌ಲೈನ್ ಮೂಲಕ APY ಖಾತೆಯನ್ನು ಪ್ರಾರಂಭಿಸಬಹುದಾಗಿದೆ.
* ಅರ್ಜಿದಾರರು ತಮ್ಮ ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ ಡ್ಯಾಶ್‌ಬೋರ್ಡ್‌ನಲ್ಲಿ APY ಗಾಗಿ ಹುಡುಕಬಹುದು.
* ಖರೀದಿದಾರರು ಅಗತ್ಯವಿರುವ ಮತ್ತು ನಾಮನಿರ್ದೇಶಿತ ಮಾಹಿತಿಯನ್ನು ನಮೂದಿಸಬೇಕು.
* ಖರೀದಿದಾರರು ಖಾತೆಯಿಂದ ಕಂತಿನ ಸ್ವಯಂ ಪಾವತಿಗೆ ಸಮ್ಮತಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಬೇಕು.
ವಿಧಾನ 2
“ಜಾಲತಾಣಕ್ಕೆ ಭೇಟಿ ನೀಡಿ”https://enps.nsdl.com/eNPS/NationalPensionSystem.html”ಹಾಗೂ “ಅಟಲ್ ಪಿಂಚಣಿ ಯೋಜನೆ” ಎಂಬುದನ್ನು ಆರಿಸಿ.
“APY ನೋಂದಣಿ” ಎಂಬುದನ್ನು ಆಯ್ಕೆ ಮಾಡಿ
ಅರ್ಜಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ. ಮೂರು ಆಯ್ಕೆಗಳ ಮೂಲಕ KYC ಅನ್ನು ಪೂರ್ತಿಗೊಳಿಸಬಹುದು. –
• ಆಫ್‌ಲೈನ್ KYC – ಇಲ್ಲಿ ಆಧಾರ್‌ನ XML ಕಡತವನ್ನು ಅಪ್‌ಲೋಡ್ ಮಾಡುವುದು ಅಗತ್ಯವಿರುತ್ತದೆ.
ಆಧಾರ್ – ಮೊಬೈಲ್ ಸಂಖ್ಯೆಗೆ OTP ಕಳುಹಿಸುವ ಮೂಲಕ KYC ಮಾಡಲಾಗುವುದು, ಆಧಾರ್‌ನೊಂದಿಗೆ ನೊಂದಾಯಿಸಿರಬೇಕು.
• ವರ್ಚುವಲ್ ಐಡಿ – KYC ಗಾಗಿ ಆಧಾರ್ ವರ್ಚುವಲ್ ಐಡಿಯನ್ನು ಸೃಷ್ಟಿಸುವುದು.
ಪ್ರಜೆಗಳು ಮೂರು ಆಯ್ಕೆಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು.
• ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ, ಸ್ವೀಕೃತಿ ಸಂಖ್ಯೆ ಸೃಷ್ಟಿಯಾಗುತ್ತದೆ.
• ನಂತರ ಪ್ರಜೆಯು ವೈಯಕ್ತಿಕ ಮಾಹಿತಿಯನ್ನು ನಮೂದಿಸಿ 60 ವರ್ಷಗಳ ನಂತರ ತನಗೆ ಬೇಕಾದ ಪಿಂಚಣಿ ಹಣವನ್ನು ನಿರ್ಧರಿಸಬೇಕು.
• ಈ ಯೋಜನೆಗೆ ಹಣವನ್ನು ಪಾವತಿಸುವ ಆವರ್ತನವನ್ನು ಪ್ರಜೆಯೇ ನಿರ್ಧರಿಸಬೇಕು.
• ಒಬ್ಬ ವ್ಯಕ್ತಿಯು ತನ್ನ ಸ್ವಂತ ಮಾಹಿತಿಗಾಗಿ ‘ಖಚಿತಪಡಿಸಿದ’ ನಂತರ, ಅವರು ನಾಮನಿರ್ದೇಶಿತರ ವಿವರಗಳನ್ನು ತುಂಬಬೇಕು. ವೈಯಕ್ತಿಕ ಹಾಗು ನಾಮನಿರ್ದೇಶಿತರ ವಿವರಗಳನ್ನು ಸಲ್ಲಿಸಿದ ಬಳಿಕ, ವ್ಯಕ್ತಿಯನ್ನು ಇ-ಸಹಿ ಮಾಡಲು NSDL ವೆಬ್‌ಸೈಟ್‌ಗೆ ಕಳುಹಿಸಲಾಗುತ್ತದೆ. ಓಟಿಪಿ ಮೂಲಕ ಆಧಾರ್ ಅನ್ನು ಸರಿಯಾಗಿ ಪರಿಶೀಲಿಸಿದ ನಂತರ, ವ್ಯಕ್ತಿಯು APY ಯಲ್ಲಿ ಯಶಸ್ವಿಯಾಗಿ ಹೆಸರು ಸೇರಿಸಲ್ಪಡುತ್ತಾನೆ. ಇ-ಎಪಿವೈ ತಾಣದ ಮೂಲಕ ಅಥವಾ ಆ ಸೌಲಭ್ಯ ನೀಡುವ ಬ್ಯಾಂಕುಗಳ ಅಂತರ್ಜಾಲ ತಾಣದ ಮುಖಾಂತರ ಡಿಜಿಟಲ್ ರೂಪದಲ್ಲಿಯೂ ಸೇರಬಹುದು. “ವೆಬ್‌ಸೈಟ್‌ಗೆ ಭೇಟಿ ನೀಡಿ”https://enps.nsdl.com/eNPS/NationalPensionSystem.html”ಹಾಗೂ “ಅಟಲ್ ಪಿಂಚಣಿ ಯೋಜನೆ” ಎಂಬುದನ್ನು ಆರಿಸಿ. ಸಹಾಯವಾಣಿ ಸಂಖ್ಯೆ – – APY ಯೋಜನೆಗೆ ಉಚಿತ ಸಹಾಯವಾಣಿ ಸಂಖ್ಯೆ 1800-110-069
ಆಫ್ ಲೈನ್
ಉಳಿತಾಯ ಖಾತೆಯನ್ನು ಹೊಂದಿರುವ ಸಮೀಪದ ಬ್ಯಾಂಕ್ ಶಾಖೆ ಅಥವಾ ಪೋಸ್ಟ್ ಆಫೀಸ್‌ಗೆ ವ್ಯಕ್ತಿಯೊಬ್ಬರು ಹೋಗಬಹುದು ಮತ್ತು APY ಖಾತೆ ತೆರೆಯಲು APY ನೊಂದಣಿ ಅರ್ಜಿಯನ್ನು ಸಲ್ಲಿಸಬಹುದು.
ಬೇಕಾಗುವ ಕಾಗದ ಪತ್ರಗಳು: –
* KYC ವಿವರಗಳನ್ನು ಚಾಲ್ತಿಯಲ್ಲಿರುವ ಬ್ಯಾಂಕ್/ಪೋಸ್ಟ್ ಆಫೀಸ್ ಉಳಿತಾಯ ಖಾತೆಯಿಂದ ತೆಗೆದುಕೊಳ್ಳಲಾಗುವುದು.
ಸಂದೇಹಗಳು: –
ನಾನು ಸ್ವಾವಲಂಬನ್ ಚಂದಾದಾರನಾಗಿದ್ದೇನೆ. ಆದರೂ ನಾನು APY ಗೆ ಅರ್ಜಿ ಹಾಕಬಹುದೇ?
ಅರ್ಹತೆ ಹೊಂದಿರುವ ಸ್ವಾವಲಂಬನ್ ಚಂದಾದಾರರನ್ನು APY ಗೆ ವರ್ಗಾಯಿಸಬಹುದು.
ಡೀಫಾಲ್ಟ್ ನಾಮಿನಿ ಅಥವಾ ರಕ್ತ ಸಂಬಂಧದ ಬಗ್ಗೆ ಏನಾದರು ಇದೆಯೇ?
ಯೋಜನೆಯನ್ನು ಪಡೆದವರು ಮದುವೆಯಾಗದಿದ್ದರೆ, ಅವರು ಯಾರನ್ನಾದರೂ ಉತ್ತರಾಧಿಕಾರಿಯಾಗಿ ನೇಮಿಸಬಹುದು. ಒಂದು ವೇಳೆ ಮದುವೆಯಾದ ನಂತರ, ಸಂಗಾತಿಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಮದುವೆಯಾದ ನಂತರ ಸಂಗಾತಿಯೇ ಉತ್ತರಾಧಿಕಾರಿಯಾಗುತ್ತಾರೆ. ಸಂಗಾತಿ ಮತ್ತು ಉತ್ತರಾಧಿಕಾರಿಯ ಆಧಾರ್ ಕಾರ್ಡ್ ವಿವರಗಳನ್ನು ನೀಡಬಹುದು.
3 ಕಂತುಗಳನ್ನು ಕಟ್ಟಲು ತಡವಾದರೆ ಏನಾಗುತ್ತದೆ?
APY ಕಂತುಗಳನ್ನು ಕಟ್ಟಲು ನಿಗದಿತ ದಿನಾಂಕಕ್ಕಿಂತ ತಡವಾದರೆ, ಯೋಜನೆಯನ್ನು ಪಡೆದವರಿಗೆ, ಎಷ್ಟು ದಿನ ತಡವಾಗಿದೆಯೋ ಅಷ್ಟು ದಿನಗಳ ವರೆಗೆ ಸ್ವಲ್ಪ ಬಡ್ಡಿಯನ್ನು ವಿಧಿಸಲಾಗುತ್ತದೆ.
4 ಕೇಂದ್ರ/ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಕೆಲಸಗಾರರು ಮತ್ತು/ಅಥವಾ NPS ಚಂದಾದಾರರು APY ಗೆ ಹಣವನ್ನು ಕಟ್ಟಬಹುದೇ?
ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಭಾರತದ ಪ್ರತಿಯೊಬ್ಬ ಪ್ರಜೆಗೂ APY ಲಭ್ಯವಿದೆ. APY ಗೆ ಸೇರಲು ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 40 ವರ್ಷಗಳು ಇರಬೇಕು.
ಆದಾಗ್ಯೂ, ಅಕ್ಟೋಬರ್ 1, 2022 ರಿಂದ, ಆದಾಯ ತೆರಿಗೆಯನ್ನು ಕಟ್ಟುತ್ತಿರುವ ಅಥವಾ ಆದಾಯ ತೆರಿಗೆಯನ್ನು ಪಾವತಿಸುತ್ತಿರುವ ಯಾವುದೇ ಪ್ರಜೆಗಳು APY ಗೆ ಸೇರಲು ಅರ್ಹರಲ್ಲ.
ನಾನು ಬ್ಯಾಂಕ್ ಉಳಿತಾಯ ಖಾತೆ ಇಲ್ಲದೆ APY ಖಾತೆಯನ್ನು ತೆರೆಯಲು ಸಾಧ್ಯವೇ?
ಇಲ್ಲ, APY ಗೆ ಸೇರಲು ಉಳಿತಾಯ ಬ್ಯಾಂಕ್ ಖಾತೆ/ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆ ಅತ್ಯಗತ್ಯ..