ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಪ್ರೋತ್ಸಾಹನ್ (PM-USP) ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕೇಂದ್ರ ವಲಯದ ಕಾರ್ಯಕ್ರಮವಾಗಿದೆ.
“ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಪ್ರೋತ್ಸಾಹನ್ (PM-USP) ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ವಿದ್ಯಾರ್ಥಿವೇತನ ಕಾರ್ಯಕ್ರಮ”ವು ಶಿಕ್ಷಣ ಮಂತ್ರಾಲಯದ ಉನ್ನತ ಶಿಕ್ಷಣ ವಿಭಾಗದ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವಾಗ ಅವರ ದಿನನಿತ್ಯದ ಖರ್ಚುಗಳ ಸ್ವಲ್ಪ ಭಾಗವನ್ನು ಸರಿದೂಗಿಸಲು ಆರ್ಥಿಕ ಸಹಾಯ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಹೈಯರ್ ಸೆಕೆಂಡರಿ/12ನೇ ತರಗತಿಯ ಬೋರ್ಡ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ಕೊಡಲಾಗುವುದು. ಕಾಲೇಜುಗಳು ಹಾಗು ವಿಶ್ವವಿದ್ಯಾಲಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ರೀತಿಯ ವೃತ್ತಿಪರ ಕೋರ್ಸ್‌ಗಳಿಗೆ ವಾರ್ಷಿಕವಾಗಿ ಅಂದಾಜು 82,000 ಹೊಸ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು.
“ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಪ್ರೋತ್ಸಾಹನ್ (PM-USP) ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ವಿದ್ಯಾರ್ಥಿವೇತನ ಕಾರ್ಯಕ್ರಮ”ವು ಶಿಕ್ಷಣ ಮಂತ್ರಾಲಯದ ಉನ್ನತ ಶಿಕ್ಷಣ ವಿಭಾಗದ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವಾಗ ಅವರ ದಿನನಿತ್ಯದ ಖರ್ಚುಗಳ ಸ್ವಲ್ಪ ಭಾಗವನ್ನು ಭರಿಸಲು ಧನ ಸಹಾಯ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹೈಯರ್ ಸೆಕೆಂಡರಿ/12ನೇ ತರಗತಿಯ ಬೋರ್ಡ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ಕೊಡಲಾಗುವುದು. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ರೀತಿಯ ವೃತ್ತಿಪರ ಕೋರ್ಸ್‌ಗಳಿಗೆ ಪ್ರತಿ ವರ್ಷ ಗರಿಷ್ಠ 82,000 ಹೊಸ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು.
ಪ್ರಯೋಜನಗಳು
ವಿದ್ಯಾರ್ಥಿವೇತನ ದರ
*ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಕೋರ್ಸುಗಳ ಪದವಿ ಹಂತದ ಮೊದಲ ಮೂರು ವರ್ಷಗಳಿಗೆ ವಾರ್ಷಿಕವಾಗಿ ₹12,000/-.
*ಸ್ನಾತಕೋತ್ತರ ಹಂತದಲ್ಲಿ ವಾರ್ಷಿಕ ₹20,000/- ಆಗಿರುತ್ತದೆ.
*ವೃತ್ತಿಪರ ಕೋರ್ಸುಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ, ಕೋರ್ಸಿನ ಅವಧಿ ಐದು (5) ವರ್ಷಗಳು/ಸಂಯೋಜಿತ ಕೋರ್ಸ್ ಆಗಿದ್ದಲ್ಲಿ, 4ನೇ ಮತ್ತು 5ನೇ ವರ್ಷದಲ್ಲಿ ವಾರ್ಷಿಕ ₹20,000/- ನೀಡಲಾಗುವುದು.
*ಬಿ.ಟೆಕ್, ಬಿ.ಇಂಜಿನಿಯರಿಂಗ್‌ನಂತಹ ತಾಂತ್ರಿಕ ಕೋರ್ಸುಗಳನ್ನು ಕಲಿಯುವ ವಿದ್ಯಾರ್ಥಿಗಳು ಪದವಿ ಹಂತದವರೆಗೆ ಮಾತ್ರ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ, ಅಂದರೆ 1, 2 ಮತ್ತು 3ನೇ ವರ್ಷಕ್ಕೆ ₹12,000 ಹಾಗೂ 4ನೇ ವರ್ಷಕ್ಕೆ ₹20,000.
ವಿತರಣಾ ಕ್ರಮ
ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿತರಿಸಲಾಗುವುದು.
ಅರ್ಹತೆಗಳು :-
* ಅರ್ಜಿದಾರರು 10+2 ಮಾದರಿಯ 12ನೇ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಆಯಾ ಪರೀಕ್ಷಾ ಮಂಡಳಿಯಿಂದ ಸಂಬಂಧಿತ ಸ್ಟ್ರೀಮ್‌ನಲ್ಲಿ ಉತ್ತೀರ್ಣ ಅಭ್ಯರ್ಥಿಗಳ 80ನೇ ಶೇಕಡಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
* ಅರ್ಜಿದಾರರು ನಿಯಮಿತ ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
* ಅರ್ಜಿದಾರರು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಮತ್ತು ಸಂಬಂಧಿತ ನಿಯಂತ್ರಣ ಸಂಸ್ಥೆಗಳಿಂದ ಮಾನ್ಯತೆ ಪಡೆದ ಕಾಲೇಜುಗಳು/ಸಂಸ್ಥೆಗಳಲ್ಲಿ ಕೋರ್ಸ್‌ಗಳನ್ನು ಕಲಿಯುತ್ತಿರಬೇಕು.
* ಅರ್ಜಿದಾರರ ಪೋಷಕರ/ಕುಟುಂಬದ ಒಟ್ಟು ವಾರ್ಷಿಕ ಆದಾಯವು ₹4,50,000/- ಮೀರಬಾರದು.
ಪ್ರತಿ ವರ್ಷ ವಿದ್ಯಾರ್ಥಿ ವೇತನದ ನವೀಕರಣಕ್ಕಾಗಿ, ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸುವುದರೊಂದಿಗೆ, ಕಡ್ಡಾಯವಾಗಿ ಹಾಜರಾತಿಯನ್ನು ಕಾಯ್ದುಕೊಳ್ಳುವುದು ಕನಿಷ್ಠ 75% ಆಗಿರತಕ್ಕದ್ದು.
* ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಅತ್ಯಗತ್ಯ.
ಹೊರಗಿಡುವಿಕೆ :-
ವ್ಯವಹಾರ ಪತ್ರಗಳ ಮೂಲಕ ಅಥವಾ ದೂರ ಶಿಕ್ಷಣದ ಮುಖಾಂತರ ಅಥವಾ ಡಿಪ್ಲೊಮಾ ತರಬೇತಿಗಳನ್ನು ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ. ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ವಿದ್ಯಾರ್ಥಿ ವೇತನದಂತಹ ಯೋಜನೆಗಳು/ಶುಲ್ಕ ರಿಯಾಯಿತಿ ಮತ್ತು ಮರುಪಾವತಿ ಯೋಜನೆಗಳು ಒಳಗೊಂಡಂತೆ ಯಾವುದೇ ಬಗೆಯ ಬೇರೆ ವಿದ್ಯಾರ್ಥಿ ವೇತನದ ಸಹಾಯಧನವನ್ನು ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಅರ್ಹರಲ್ಲ.
ಒಂದು ಬಾರಿ ನೋಂದಣಿ (OTR)
ಹಂತ 1: ರಾಷ್ಟ್ರೀಯ ವಿದ್ಯಾರ್ಥಿ ವೇತನ ತಾಣದ (NSP) ಒಂದು ಬಾರಿಯ ದಾಖಲಾತಿ ಪುಟಕ್ಕೆ ಹೋಗಿ ಮತ್ತು “OTR ಗಾಗಿ ಅರ್ಜಿ ಸಲ್ಲಿಸಿ” ಎಂಬುದರ ಮೇಲೆ ಕ್ಲಿಕ್ ಮಾಡಿ.
ಹಂತ 2: OTR ಗಾಗಿನ ಮಾರ್ಗದರ್ಶಿ ಸೂತ್ರಗಳು ತೆರೆದುಕೊಳ್ಳುತ್ತವೆ. ಕೆಳಗೆ ಸ್ಕ್ರಾಲ್ ಮಾಡಿ. ಒಪ್ಪಂದವನ್ನು ಗಮನವಿಟ್ಟು ಓದಿ. ಷರತ್ತುಗಳನ್ನು ಒಪ್ಪಿಕೊಳ್ಳಿ. “ಮುಂದೆ” ಕ್ಲಿಕ್ ಮಾಡಿ.
ಹಂತ 3: ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು OTR ನೊಂದಣಿ ಫಾರ್ಮ್‌ನಲ್ಲಿ ನೊಂದಾಯಿಸಿ. ಎಲ್ಲಾ ವ್ಯವಹರಿಸುವಿಕೆ/ಸಂಪರ್ಕವನ್ನು ನಮೂದಿಸಿದ ಮೊಬೈಲ್/ಇ-ಮೇಲ್‌ನಲ್ಲಿ ಮಾತ್ರ ಮಾಡಲಾಗುವುದು.
ಹಂತ 4: ಪೋಷಕರು/ಕಾನೂನು ರಕ್ಷಕರು/ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಆಧಾರ್ ಇ-ಕೆವೈಸಿಯನ್ನು ಪೂರ್ತಿಗೊಳಿಸಿ. ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು “ಖಚಿತಪಡಿಸಿ” ಕ್ಲಿಕ್ ಮಾಡಿ.
ಹಂತ 5: ಮುಂದಿನ ಪುಟದಲ್ಲಿ ಮಾಹಿತಿಯನ್ನು ನಮೂದಿಸಿ ಮತ್ತು “ಮುಗಿದಿದೆ” ಕ್ಲಿಕ್ ಮಾಡಿ. ನಿಮಗೆ ಉಲ್ಲೇಖ ಸಂಖ್ಯೆ ದೊರೆಯುತ್ತದೆ. Google Play Store ನಿಂದ NSP OTR ಅಪ್ಲಿಕೇಶನ್ ಮತ್ತು ಆಧಾರ್ FaceRD ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು OTR ಅನ್ನು ಸೃಷ್ಟಿಸಲು ಮುಖದ ಮೂಲಕ ದೃಢೀಕರಣವನ್ನು ಪೂರ್ತಿಗೊಳಿಸಿ.
ಹಂತ 6: ಯಶಸ್ವಿಯಾದ ಮುಖದ ದೃಢೀಕರಣದ ನಂತರ, ನಿಮ್ಮ 14-ಅಂಕಿಯ OTR ಸಂಖ್ಯೆ ಸೃಷ್ಟಿಯಾಗುತ್ತದೆ ಮತ್ತು SMS ಮೂಲಕ ಕಳುಹಿಸಲಾಗುತ್ತದೆ.
ಅರ್ಜಿ ಪ್ರಕ್ರಿಯೆ :- ಆನ್ಲೈನ್
ಹೊಸ ಅರ್ಜಿ
ಹಂತ 1: ರಾಷ್ಟ್ರೀಯ ವಿದ್ಯಾರ್ಥಿ ವೇತನ ಜಾಲತಾಣದ ಅರ್ಜಿದಾರರ ಪ್ರವೇಶ ಪುಟಕ್ಕೆ ಭೇಟಿ ನೀಡಿ. “OTR ಪ್ರವೇಶ” ಆಯ್ಕೆ ಮಾಡಿ ಮತ್ತು ನಿಮ್ಮ OTR ಸಂಖ್ಯೆ ಹಾಗೂ ಗುಪ್ತಪದವನ್ನು ನಮೂದಿಸಿ.
ಹಂತ 2: ಕ್ಯಾಪ್ಚಾ ನಮೂದಿಸಿ ಮತ್ತು “ಪ್ರವೇಶಿಸು” ಅನ್ನು ಕ್ಲಿಕ್ ಮಾಡಿ.
ಹಂತ 3: ಮುಂದಿನ ತೆರೆಯಲ್ಲಿ, ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಯನ್ನು ನಮೂದಿಸಿ. ನಿಮ್ಮನ್ನು ಗುಪ್ತಪದವನ್ನು ಮರುಹೊಂದಿಸುವ ತೆರೆಗೆ ಕರೆದೊಯ್ಯಲಾಗುವುದು. ಹೊಸ ಗುಪ್ತಪದವನ್ನು ರಚಿಸಿ ಮತ್ತು ಖಚಿತಪಡಿಸಿ.
ಹಂತ 4: “ಸಲ್ಲಿಸು” ಅನ್ನು ಕ್ಲಿಕ್ ಮಾಡಿ. ನಿಮ್ಮನ್ನು “ಅರ್ಜಿದಾರರ ಡ್ಯಾಶ್‌ಬೋರ್ಡ್”ಗೆ ಕರೆದೊಯ್ಯಲಾಗುವುದು.
ಹಂತ 5: ಎಡ ಫಲಕದಲ್ಲಿ, “ಅರ್ಜಿ ನಮೂನೆ” ಕ್ಲಿಕ್ ಮಾಡಿ. * ಎಂದು ಗುರುತಿಸಲಾದ ಜಾಗಗಳು ಕಡ್ಡಾಯವಾಗಿರುತ್ತವೆ. ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ. ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಯನ್ನು (ಜಾತಿ, ಶೈಕ್ಷಣಿಕ ಅರ್ಹತೆಗಳು ಇತ್ಯಾದಿ) ಭಾರತ ಸರ್ಕಾರದ MeitY ಯ DIGILOCKER ಸೌಲಭ್ಯದ ಮೂಲಕ ಮಾಡಲಾಗುವುದು.
ಹಂತ 6: ನಂತರ ಅರ್ಜಿಯನ್ನು ಪೂರ್ಣಗೊಳಿಸಲು ನೀವು “ಕರಡು ರೂಪದಲ್ಲಿ ಉಳಿಸು” ಮೇಲೆ ಕ್ಲಿಕ್ ಮಾಡಬಹುದು. ಇಲ್ಲದಿದ್ದರೆ, ಅರ್ಜಿ ಸಲ್ಲಿಸಲು “ಅಂತಿಮವಾಗಿ ಸಲ್ಲಿಸು” ಮೇಲೆ ಕ್ಲಿಕ್ ಮಾಡಿ.
ಪಾವತಿ ವಿವರವನ್ನು ಗಮನಿಸಿ
ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ NSP ಅರ್ಜಿ ಗುರುತಿನ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಜಾಲತಾಣದಲ್ಲಿರುವ “ನಿಮ್ಮ ಪಾವತಿಯನ್ನು ತಿಳಿಯಿರಿ” ಎಂಬ ಟೆಂಪ್ಲೇಟ್‌ನಿಂದ ತಮ್ಮ ಪಾವತಿ ವಿವರಗಳನ್ನು ಗಮನಿಸಬಹುದು.
ಸೂಚನೆ 1: ರಾಷ್ಟ್ರೀಯ ವಿದ್ಯಾರ್ಥಿ ವೇತನ ಜಾಲತಾಣವು ಜಾಲತಾಣ ತೆರೆಯುವ ಮತ್ತು ಮುಚ್ಚುವ ಸಮಯವನ್ನು ನೀಡುತ್ತದೆ.
ಸೂಚನೆ 2: ಆನ್‌ಲೈನ್ ಅರ್ಜಿಗಳನ್ನು ಎರಡು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ, ಅಂದರೆ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಸಂಸ್ಥೆ ಮತ್ತು ನಂತರ ಸಂಬಂಧಪಟ್ಟ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಥವಾ ರಾಜ್ಯ ನೋಡಲ್ ಏಜೆನ್ಸಿಯಾಗಿ ರಾಜ್ಯದಿಂದ ನೇಮಿಸಲ್ಪಟ್ಟ ಯಾವುದೇ ಇತರ ಸಂಸ್ಥೆ/ ಅಧಿಕಾರಿ (ಹೊಸ ಮತ್ತು ನವೀಕರಣ ಅರ್ಜಿದಾರರಿಗೆ).
ಸೂಚನೆ 3: ನವೀಕರಣ ಅಥವಾ ಪರಿಶೀಲನೆಯಲ್ಲಿ ವಿಳಂಬವಾದ ಕಾರಣ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದಿಂದ ಶಾಶ್ವತವಾಗಿ ತೆಗೆದುಹಾಕಲಾಗುವುದಿಲ್ಲ. ಆದಾಗ್ಯೂ, ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ನವೀಕರಣ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಈ ಸಮಯವನ್ನು ತಪ್ಪಿಸಿಕೊಂಡರೆ ಆ ವರ್ಷದ ನವೀಕರಣಕ್ಕೆ ಅವಕಾಶವಿರುವುದಿಲ್ಲ. ಆದರೂ, ವಿದ್ಯಾರ್ಥಿಗಳು ಅರ್ಹತಾ ಷರತ್ತುಗಳನ್ನು ಪೂರೈಸಿದರೆ ಮುಂದಿನ ವರ್ಷದಲ್ಲಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು.
ದೂರು ನಿವಾರಣೆ
ಮೇಲ್ಕಂಡ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕೊರತೆಗಳು/ದೂರುಗಳಿದ್ದಲ್ಲಿ, NSP ಜಾಲತಾಣದಲ್ಲಿ (ಸೇವೆಗಳ ಟ್ಯಾಬ್) ಇ-ಮೇಲ್ ಲಭ್ಯವಿರುವ ನೋಡಲ್ ಅಧಿಕಾರಿಯಲ್ಲದೆ, ಈ ಕೆಳಗಿನ ಕೊಂಡಿಗೆ http://pgportal.gov.in/grievancenew.aspx ಗೆ ದಾಖಲಿಸಬಹುದು.
ಬೇಕಾಗುವ ದಾಖಲಾತಿಗಳು :-
ಅರ್ಜಿಯನ್ನು ಸಲ್ಲಿಸುವಾಗ ಈ ಕೆಳಗಿನ ಕಾಗದಪತ್ರಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ:
ಎ. ಹೊಸತು: 12ನೇ ತರಗತಿಯ ಅಂಕಪಟ್ಟಿ, ಕುಟುಂಬದ ಆದಾಯ ಪ್ರಮಾಣಪತ್ರ, ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ವರ್ಗ/ಜಾತಿ ದೃಢೀಕರಣ, ವಿಕಲಾಂಗತೆ ಪ್ರಮಾಣಪತ್ರ (ಅನ್ವಯಿಸಿದರೆ)
ಬಿ. ನವೀಕರಣ: ಹಿಂದಿನ ವರ್ಷದ ಅಂಕಪಟ್ಟಿ
ಸಂಸ್ಥೆಯ ನೋಡಲ್ ಅಧಿಕಾರಿ (INO) ಕೇಳಿದರೆ, ಮೇಲೆ ತಿಳಿಸಿದ ಕಾಗದಪತ್ರಗಳ ಪ್ರತಿಯನ್ನು ಪರಿಶೀಲಿಸುವ ಸಮಯದಲ್ಲಿ ಸಂಸ್ಥೆಗಳಿಗೆ ನೀಡಬೇಕು.
ಸಂದೇಹಗಳು :-
ಫಲಾನುಭವಿಗಳನ್ನು ಆರಿಸಲು ಅನುಸರಿಸಿದ ಅರ್ಹತಾ ಪಟ್ಟಿಯನ್ನು ರಚಿಸುವ ಬಗೆ
ಅರ್ಹ ಅಭ್ಯರ್ಥಿಗಳಿಂದ, ಲಿಂಗ (50 ಗಂಡು: 50 ಹೆಣ್ಣು), ಸ್ಟ್ರೀಮ್(3-ವಿಜ್ಞಾನ: 1-ವಾಣಿಜ್ಯ: 3-ಮಾನವಿಕತೆ), ವರ್ಗ (SC-15%, ST-7.5% ಮತ್ತು OBC-27%) ಆಧಾರದ ಮೇಲೆ ಪ್ರತಿಭಾನ್ವಿತರ ಪಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಆಯಾ ರಾಜ್ಯ ಶಿಕ್ಷಣ ಮಂಡಳಿಗಳ ಹಂಚಿಕೆಯಾದ ಸ್ಲಾಟ್‌ಗಳಿಂದ ಬೆಂಚ್‌ಮಾರ್ಕ್ ವಿಕಲಾಂಗತೆ (40% ಅಥವಾ ಅದಕ್ಕಿಂತ ಹೆಚ್ಚಿನ ವಿಕಲಾಂಗತೆ) ಹೊಂದಿರುವ ವಿದ್ಯಾರ್ಥಿಗಳಿಗೆ 5% ಸಮತಲ ಮೀಸಲಾತಿಯನ್ನು ನೀಡಲಾಗುತ್ತದೆ. ಅರ್ಜಿಗಳ ಸಂಖ್ಯೆಯಲ್ಲಿ ಕಡಿಮೆಯಿದ್ದಲ್ಲಿ, 2022-23ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಹೊಸ ವಿದ್ಯಾರ್ಥಿವೇತನಗಳಿಗೆ ಸ್ಲಾಟ್‌ಗಳ ಬಳಕೆಯನ್ನು ಹೆಚ್ಚಿಸಲು ವಿದ್ಯಾರ್ಥಿವೇತನ ಸ್ಲಾಟ್‌ಗಳು ವಿಭಾಗಗಳು (Gen, OBC, SC & ST), ಲಿಂಗ (ಮಹಿಳೆ, ಪುರುಷ) ಮತ್ತು ರಾಜ್ಯ ಕೋಟಾದ ನಡುವೆ ಪರಸ್ಪರ ಕಾರ್ಯನಿರ್ವಹಿಸುತ್ತವೆ, ಇದು ಯೋಜನೆಗಳ SC/ST ನಿಧಿ ಹಂಚಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಮತ್ತು NITI ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.
ವಿದ್ಯಾರ್ಥಿ ವೀತನ ದರ :-
ಕಾಲೇಜು ಹಾಗು ವಿಶ್ವವಿದ್ಯಾನಿಲಯದ ಶಿಕ್ಷಣಕ್ರಮಗಳ ಮೊದಲ ಮೂರು ವರ್ಷಗಳ ಪದವಿ ಹಂತದಲ್ಲಿ ವಾರ್ಷಿಕವಾಗಿ 12,000/- ರೂ.ಗಳು ಮತ್ತು ಸ್ನಾತಕೋತ್ತರ ಹಂತದಲ್ಲಿ ವಾರ್ಷಿಕವಾಗಿ 20,000/- ರೂ.ಗಳು ವಿದ್ಯಾರ್ಥಿವೇತನದ ಮೊತ್ತವಾಗಿರುತ್ತದೆ. ತಾಂತ್ರಿಕ ಶಿಕ್ಷಣಕ್ರಮಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 4 ಮತ್ತು 5ನೇ ವರ್ಷದಲ್ಲಿ ವಾರ್ಷಿಕವಾಗಿ 20,000/- ರೂ.ಗಳನ್ನು ನೀಡಲಾಗುವುದು. ಬಿ.ಟೆಕ್/ಬಿಇ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 4 ವರ್ಷಗಳವರೆಗೆ ಮಾತ್ರ ವಿದ್ಯಾರ್ಥಿವೇತನ ಲಭ್ಯವಿರುತ್ತದೆ, ಅಂದರೆ ಮೊದಲ ಮೂರು ವರ್ಷಗಳಿಗೆ ವಾರ್ಷಿಕವಾಗಿ 12000 ರೂ.ಗಳು ಮತ್ತು 4ನೇ ವರ್ಷದಲ್ಲಿ ವಾರ್ಷಿಕವಾಗಿ 20,000 ರೂ.ಗಳು.
ವಿದ್ಯಾರ್ಥಿವೇತನದ ಅವಧಿ ಮತ್ತು ನವೀಕರಣಕ್ಕೆ ಇರುವ ಮಾನದಂಡಗಳು:
ಒಬ್ಬ ವಿದ್ಯಾರ್ಥಿಯು 5 ವರ್ಷಗಳನ್ನು ಮೀರದಂತೆ ಒಟ್ಟು ಅವಧಿಗೆ ವಿದ್ಯಾರ್ಥಿವೇತನಕ್ಕೆ ಅರ್ಹನಾಗಿರುತ್ತಾನೆ. ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಸ್ನಾತಕೋತ್ತರ ಹಂತದವರೆಗೆ ವರ್ಷದಿಂದ ವರ್ಷಕ್ಕೆ ನವೀಕರಿಸಬಹುದು (ಪದವಿ ಹಂತದಲ್ಲಿ ಪದವಿಗೆ ಕಾರಣವಾಗುವ ತಾಂತ್ರಿಕ ಶಿಕ್ಷಣಕ್ರಮಗಳನ್ನು ಅನುಸರಿಸುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ). ವಿದ್ಯಾರ್ಥಿಯು ಕನಿಷ್ಠ 50% ಅಂಕಗಳನ್ನು ಗಳಿಸಬೇಕು ಮತ್ತು ಕನಿಷ್ಠ 75% ಹಾಜರಾತಿಯನ್ನು ಹೊಂದಿರಬೇಕು.
ವಿದ್ಯಾರ್ಥಿ ವೇತನವನ್ನು ವಿತರಿಸುವ ವಿಧಾನ:
ವಿದ್ಯಾರ್ಥಿವೇತನವನ್ನು ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತದೆ, ಅಂದರೆ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ವಿದ್ಯಾರ್ಥಿವೇತನದ ಹಣವನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿವೇತನಗಳ ಸುಗಮ ವಿತರಣೆಗಾಗಿ, ವಿದ್ಯಾರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಜೋಡಣೆ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಜಾಲತಾಣದಲ್ಲಿರುವ “ನಿಮ್ಮ ಪಾವತಿಯನ್ನು ತಿಳಿಯಿರಿ” ಟೆಂಪ್ಲೇಟ್‌ನಿಂದ ತಮ್ಮ ಪಾವತಿ ಸ್ಥಿತಿಗತಿಯನ್ನು ಗಮನಿಸಬಹುದು ಮತ್ತು ತಮ್ಮ ಲಾಗಿನ್ ಮಾಹಿತಿಯೊಂದಿಗೆ NSPಯಲ್ಲಿಯೂ ಸಹ ಪರಿಶೀಲನೆ ಮಾಡಬಹುದು. PFMS ಸ್ಥಿತಿಯನ್ನು “ಯಶಸ್ಸು” ಎಂದು ತೋರಿಸಿದರೆ, ವ್ಯವಹಾರದ ಸಮಯದಲ್ಲಿ ಆಧಾರ್‌ನೊಂದಿಗೆ ಜೋಡಣೆಯಾದ ಬ್ಯಾಂಕ್ ಖಾತೆಯ ಸ್ಥಿತಿಯನ್ನು ವಿದ್ಯಾರ್ಥಿಯು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ವಿದ್ಯಾರ್ಥಿವೇತನದ ಅರ್ಜಿಗೆ ಸಂಬಂಧಿಸಿದಂತೆ ದೂರುಗಳು/ ಪ್ರಶ್ನೆಗಳು/ ಅಹವಾಲುಗಳನ್ನು ಸಲ್ಲಿಸುವುದು:
ದೂರುಗಳನ್ನು ಅವರ ಲಾಗಿನ್‌ನಲ್ಲಿ ಲಭ್ಯವಿರುವ ದೂರು ದಾಖಲಾತಿ ಟ್ಯಾಬ್‌ನಲ್ಲಿ ದಾಖಲಿಸಬೇಕಾಗುತ್ತದೆ. ಜಾಲತಾಣದ ಕಾರ್ಯನಿರ್ವಹಣೆ/ ಆನ್‌ಲೈನ್ ಅರ್ಜಿಯ ಪ್ರಕ್ರಿಯೆ/ ಪರಿಶೀಲನೆಯ ಸ್ಥಿತಿಗತಿ ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ದೂರುಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಜಾಲತಾಣಕ್ಕೆ ತಿಳಿಸಬಹುದು. “ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ PM-USP ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆ”ಗೆ ಸಂಬಂಧಿಸಿದ ದೂರುಗಳನ್ನು ಉನ್ನತ ಶಿಕ್ಷಣ ಇಲಾಖೆ, MoE ಗೆ ತಿಳಿಸಬಹುದು.
ನನ್ನ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಹೇಗೆ ಪರಿಶೀಲಿಸುವುದು:
ನಿಮ್ಮ ಆಧಾರ್ ಸಂಖ್ಯೆ/OTR ಸಂಖ್ಯೆಯನ್ನು ನಮೂದಿಸುವುದರ ಮೂಲಕ ನೀವು ‘ವಿದ್ಯಾರ್ಥಿ ಲಾಗಿನ್’ ಆಯ್ಕೆಯ ಅಡಿಯಲ್ಲಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ, ‘ನನ್ನ ಅರ್ಜಿ’ ಆಯ್ಕೆಯ ಅಡಿಯಲ್ಲಿ, ನಿಮ್ಮ ಅರ್ಜಿ ಗುರುತಿನ ಸಂಖ್ಯೆಯ ಮುಂದೆ ‘ನಿಮ್ಮ ಸ್ಥಿತಿಯನ್ನು ಪರೀಕ್ಷಿಸಿ’ ಆಯ್ಕೆಯನ್ನು ನೀವು ನೋಡಬಹುದು. ಈ ಆಯ್ಕೆಯ ಮೂಲಕ ನಿಮ್ಮ ಆನ್‌ಲೈನ್ ಅರ್ಜಿಯ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
.ಯುಐಡಿ ಸಂಖ್ಯೆ/ಆಧಾರ್ ಸಂಖ್ಯೆ ಅಂದರೆ :-
‘ಆಧಾರ್’ ಸಂಖ್ಯೆ ಅಂತಾನೂ ಕರೆಯಲ್ಪಡುವ ಯುಐಡಿ ಸಂಖ್ಯೆ ಅನ್ನೋದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡೋ ವಿಶಿಷ್ಟ ಗುರುತಿನ ಸಂಖ್ಯೆ ಆಗಿರುತ್ತೆ. ವಿದ್ಯಾರ್ಥಿ ವೇತನದ ಮೊತ್ತವನ್ನ ವರ್ಗಾವಣೆ ಮಾಡೋಕೆ ಇಚ್ಛೆ ಇರೋ ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆನ ಸೇರಿಸಿರಬೇಕು.